ಮನಕತ್ತೂರು

ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ

ಮನಕತ್ತೂರು ಊರನ್ನು ಕಾಯುವ ದೇವರ ಸನ್ನಿಧಿ.

೧ಶ್ರೀ ಕಾಲಭೈರವ

ಪುರಾಣಗಳು ಕಾಲಭೈರವನನ್ನು ಶಿವನ ಉಗ್ರ ರೂಪವೆಂದು ಹೇಳುತ್ತವೆ. ಅಹಂಕಾರವನ್ನು ಮುರಿಯಲು ಶಿವನಿಂದಲೇ ಹುಟ್ಟಿದವನು ಭೈರವ.

“ಕಾಲ” ಎಂದರೆ ಸಮಯ. ಸಮಯಕ್ಕೂ ಒಡೆಯನಾದ್ದರಿಂದ ಅವನು ಕಾಲಭೈರವ. ಶಿವನ ಕ್ಷೇತ್ರಗಳನ್ನು ಕಾಯುವ ಕ್ಷೇತ್ರಪಾಲನೂ ಅವನೇ.

ಹಾಸನ, ಮಂಡ್ಯ, ತುಮಕೂರು ಕಡೆಗಳಲ್ಲಿ ಅನೇಕ ಮನೆತನಗಳಿಗೆ ಶ್ರೀ ಕಾಲಭೈರವೇಶ್ವರ ಮನೆದೇವರು.

ತ್ರಿಶೂಲ
ಶಿವನ ಶಕ್ತಿ.
ಡಮರು
ಸೃಷ್ಟಿಯ ನಾದ.
ನಾಯಿ
ಭೈರವನ ಜೊತೆಗಾರ. ಎಚ್ಚರ ಮತ್ತು ನಂಬಿಕೆಯ ಗುರುತು.
ಕ್ಷೇತ್ರಪಾಲ
ಊರನ್ನೂ ಭಕ್ತರನ್ನೂ ಕಾಯುವವನು.
ಹೂವಿನ ಹಾರಗಳು ಮತ್ತು ದೀಪಗಳೊಂದಿಗೆ ಅಲಂಕೃತರಾದ ಶ್ರೀ ಕಾಲಭೈರವೇಶ್ವರ ಸ್ವಾಮಿ, ಪಕ್ಕದಲ್ಲಿ ತ್ರಿಶೂಲ
ಪುಷ್ಪಾಲಂಕಾರದಲ್ಲಿ ಶ್ರೀ ಕಾಲಭೈರವೇಶ್ವರ
ಬಣ್ಣದ ದೀಪಗಳಿಂದ ಬೆಳಗುವ ದೇವಸ್ಥಾನದ ಗೋಪುರ ಮತ್ತು ಕೇಸರಿ ಧ್ವಜ; ಕೆಳಗೆ ಆರತಿ ಮೆರವಣಿಗೆ
ದೀಪೋತ್ಸವಕ್ಕೆ ದೀಪಾಲಂಕೃತ ದೇವಸ್ಥಾನ

೨ನಮ್ಮ ದೇವಸ್ಥಾನ

ದೇವಸ್ಥಾನದ ಮುಂಬಾಗಿಲ ಮೇಲಿನ ಗೋಪುರದಲ್ಲಿ ದೇವತೆಗಳ ಬಣ್ಣದ ಶಿಲ್ಪಗಳಿವೆ. ಕಾರ್ತೀಕ ದೀಪೋತ್ಸವದ ರಾತ್ರಿ ಇಡೀ ಗೋಪುರ ದೀಪಗಳಿಂದ ಬೆಳಗುತ್ತದೆ.

ಹಬ್ಬದ ದಿನಗಳಲ್ಲಿ ಸ್ವಾಮಿಗೆ ಬೆಳ್ಳಿಯ ಪ್ರಭಾವಳಿ ಮತ್ತು ಹೂವಿನ ಅಲಂಕಾರ.

ದೇವಸ್ಥಾನದ ಹಳೆಯ ಕಥೆಗಳನ್ನು ಊರಿನ ಹಿರಿಯರಿಂದ ಕೇಳಿ ಇಲ್ಲಿ ಬರೆಯಬೇಕಿದೆ. ನಿಮಗೆ ಗೊತ್ತಿರುವ ಕಥೆ ಅಥವಾ ಹಳೆಯ ಫೋಟೋ ಇದ್ದರೆ ನಮಗೆ ಇಮೇಲ್ ಮಾಡಿ: kalabhairava.manakathuru@gmail.com

೩ಮನಕತ್ತೂರು

ಮನಕತ್ತೂರು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಳ್ಳಿ. ಕನಿಷ್ಠ ಒಂಬೈನೂರು ವರ್ಷ ಹಳೆಯ ಊರು. ಕ್ರಿ.ಶ. ೧೧೦೧ರ ಒಂದು ಹೊಯ್ಸಳ ಶಾಸನ “ಮನಗತ್ತೂರು” ಊರನ್ನು ಕಟ್ಟಿದ ಗಾವುಂಡರ ಹೆಸರು ಹೇಳುತ್ತದೆ.

ಆ ಶಾಸನ ಕಲ್ಲು ನಮ್ಮ ದೇವಸ್ಥಾನದ ಆವರಣದಲ್ಲಿದೆ. ಆದರೆ ಅದು ಈ ದೇವಾಲಯದ ಕುರಿತದ್ದಲ್ಲ.

ಶಾಸನದ ಪುಟ
ದೂರದಿಂದ ಕಾಣುವ ದೀಪಾಲಂಕೃತ ದೇವಸ್ಥಾನ, ರಾತ್ರಿಯ ಹೊತ್ತು
ರಾತ್ರಿಯಲ್ಲಿ ದೇವಸ್ಥಾನ